ಕಾರಾಗೃಹದ 85 ಕೈದಿಗಳಿಗೆ ಎಚ್.ಐ.ವಿ ಪಾಸಿಟಿವ್ ,ಆದರೆ ಸೋಂಕು ತಗುಲಿದ್ದು ಹೇಗೆ ?


ಅಸ್ಸಾಂ: ರಾಜ್ಯದ ನಾಗಾಂವ್ನ ಕೇಂದ್ರ ಹಾಗೂ ವಿಶೇಷ ಜೈಲಿನ 85 ಕೈದಿಗಳಿಗೆ ಹೆಚ್.ಐ.ವಿ ಪಾಸಿಟಿವ್ ಸೋಂಕು ತಲುಗಲಿರುವುದಾಗಿ ಆರೋಗ್ಯ ಅಧಿಕಾರಿಗಳು ಮಾಧ್ಯಮಗಳಿಗೆ ಇಂದು ತಿಳಿಸಿದ್ದಾರೆ.
ವಿಶೇಷ ಜೈಲಿನ 45 ಹಾಗೂ ಕೇಂದ್ರ ಕಾರಾಗೃಹದ 40 ಕೈದಿಗಳನ್ನು ಶುಕ್ರವಾರ ಆರೋಗ್ಯ ತಪಾಸಣೆಗಾಗಿ ಒಳಪಡಿಸಿದಾಗ ಈ ವಿಷಯವು ಹೊರ ಬಿದ್ದಿದೆ. ಈ ವೇಳೆಗೆ ಎಲ್ಲರೂ ಹೆಚ್.ಐವಿ ಪೀಡಿತರಾಗಿರುವುದು ವೈದ್ಯರ ಗಮನಕ್ಕೆ ಬಂದಿದೆ ಎಂದು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ನಾಥ್ ಅವರು ಮಾಧ್ಯಮಗಳಿಗೆ ಇಂದು ತಿಳಿಸಿದ್ದಾರೆ.
ಕಳೆದ ತಿಂಗಳು ಇದೇ ಜೈಲಿನ 88 ಕೈದಿಗಳಲ್ಲಿ ಹೆಚ್.ಐ.ವಿ ಪಾಸಿಟಿವ್ ಸೋಂಕು ತಗುಲಿದ ಬಗ್ಗೆ ವರದಿಯಾಗಿತ್ತು. 88 ಜನರ ಪೈಕಿ ನಾಲ್ಕು ಜನ ಮಹಿಳಾ ಖೈದಿಗಳಿಗೆ ಕೂಡ ಪಾಸಿಟಿವ್ ಸೋಂಕು ತಗುಲಿತ್ತು.
ಸೋಂಕು ಹರಡಿದ್ದು ಹೇಗೆ ?
ಜೈಲುವಾಸಿಗಳಿಗೆ ಹೆಚ್.ಐವಿ ಸೋಂಕು ತಗುಲಿದ್ದು ಹೇಗೆ ಎನ್ನುವ ಪ್ರಶ್ನೆಗೆ ವೈದ್ಯರು ಇದೀಗ ಉತ್ತರವನ್ನು ನೀಡಿದ್ದಾರೆ. ಇವರೆಲ್ಲ ಡ್ರಗ್ಸ್ ವೈಸನಿಗಳಾಗಿದ್ದಾರೆ. ಡ್ರಗ್ಸ್ ತೆಗೆದುಕೊಳ್ಳಲು ಒಂದೇ ಸಿರಂಜಿಯನ್ನು ಎಲ್ಲರೂ ಕೂಡ ಬಳಸಿದ್ದರಿಂದಾಗಿ ಸೋಂಕು ಹರಡಿದೆ ಎಂದು ಇದೀಗ ತಿಳಿದು ಬಂದಿದೆ.
ಜೈಲಿನಲ್ಲಿ ಡ್ರಗ್ಸ್ ಬಂದಿದ್ದು ಹೇಗೆ ?
ಇನ್ನು ಜೈಲುವಾಸಿಗಳಿಗೆ ಹೆಚ್.ಐ.ವಿ ಸೋಂಕು ಹರಡಲು ಡ್ರಗ್ಸ್ ತೆಗೆದುಕೊಳ್ಳಲು ಬಳಿಸಿದಂತಹ ಸಿರಂಜಿ ಕಾರಣ ಎನ್ನುವ ಅಂಶವು ಎಲ್ಲರ ಗಮನಕ್ಕೆ ಬರುತ್ತಿದ್ದಂತೆ ಸಾಕಷ್ಟು ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ. ಜೈಲಿನಲ್ಲಿ ಡ್ರಗ್ಸ್ ಬಂದಿದ್ದು ಹೇಗೆ ? ಎನ್ನುವ ಪ್ರಶ್ನೆಗೆ ಉತ್ತರ ಇನ್ನೂ ಯಾರಿಗೂ ಸಿಕ್ಕಿಲ್ಲ. ಜೈಲುವಾಸಿಗಳಿಗೆ ಅಷ್ಟು ಸುಲಭವಾಗಿ ಡ್ರಗ್ಸ್ ದೊರೆಯಲು ಅಲ್ಲಿಯ ಅಧಿಕಾರಿಗಳ ಬೆಂಬಲವು ಇದ್ದಿರಬಹುದು ಎಂದು ಇದೀಗ ಊಹಿಸಲಾಗುತ್ತಿದೆ.