ಉಡುಪಿ: ಅಂಗಡಿಯ ಶಟರ್ ಮುರಿದು ಲಕ್ಷಾಂತರ ರೂ.ಮೌಲ್ಯದ ಸೊತ್ತು ಕಳವು
.webp)

Vishwapriya News
ಉಡುಪಿ , ಜೂನ್ 24: ಅಂಗಡಿಯ ಶಟರ್‌ಗೆ ಹಾಕಿದ ಬೀಗ ಮುರಿದು ಲಕ್ಷಾಂತರ ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.
ಅಂಬಲಪಾಡಿಯ ಆನಂದ ಭಟ್ ಅವರು ಪ್ರಶಾಂತ್ ಶೆಟ್ಟಿ ಅವರೊಂದಿಗೆ ಸೇರಿ ಬಲಾಯಿಪಾದೆ ಬಳಿ ಡಿಸ್ಟ್ರಿಬ್ಯೂಶನ್ ಅಂಗಡಿಯನ್ನು ನಡೆಸಿಕೊಂಡಿದ್ದು, ಅದರಲ್ಲಿ ಐಟಿಸಿ ಕಂಪೆನಿಯ ಸಿಗರೇಟ್ ಮತ್ತು ಇತರ ಪದಾರ್ಥಗಳನ್ನು ಕೂಡ ಸಂಗ್ರಹಿಸಿದ್ದರು.
ಜೂ.21ರಿಂದ 22ರ ನಡುವಿನ ಅವಧಿಯಲ್ಲಿ ಅಂಗಡಿಯ ಶಟರ್ ಮುರಿದು ಅಂಗಡಿ ಒಳಗೆ ಪ್ರವೇಶಿಸಿದ ಕಳ್ಳರು ಕ್ಯಾಶ್ ಡ್ರಾವರ್‌ನಲ್ಲಿದ್ದ 17 ಸಾವಿರ ರೂ.ನಗದು ಹಾಗೂ 5,47,744 ರೂ.ಮೌಲ್ಯದ ಐಟಿಸಿ ಕಂಪೆನಿಯ ಸಿಗರೇಟ್ ಪ್ಯಾಕ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 5,64,744 ರೂ.ಆಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.