•   Wednesday, 22 Mar, 2023
film news dhiganth

ನಟ ದಿಗಂತ್‌ಗೆ ಸಣ್ಣ ಇಂಜುರಿಯಾಗಿದೆ ಅಷ್ಟೇ'-ತಂದೆ ಕೃಷ್ಣಮೂರ್ತಿ ಸ್ಪಷ್ಟನೆ

Generic placeholder image
  Vishwapriya News

ಬೆಂಗಳೂರು, ಜೂ 22 : ನಟ ದಿಗಂತ್‌ಗೆ ಬಲವಾದ ಏಟಾಗಿಲ್ಲ. ಸಣ್ಣ ಇಂಜುರಿಯಾಗಿದ್ದು, ಆತಂಕ ಅನಗತ್ಯ ಎಂಬುದಾಗಿ ದಿಗಂತ್ ತಂದೆ ಕೃಷ್ಣಮೂರ್ತಿ ಸ್ಪಷ್ಟ ಪಡಿಸಿದ್ದಾರೆ.

ಮಣಿಪಾಲ್ ಆಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಗಂತ್‌ಗೆ ಚಿಕಿತ್ಸೆ ನೀಡುವ ವೈದ್ಯರೊಂದಿಗೆ ಮಾತನಾಡಿದ್ದೇನೆ. ಅಲ್ಲದೆ ಈಗಷ್ಟೇ ದಿಗಂತ್ ಜೊತೆಯೂ ಮಾತನಾಡಿದ್ದೇನೆ. ಯಾವುದೇ ಗಂಭೀರ ಸ್ವಭಾವದ ಗಾಯಗಳಾಗಿಲ್ಲ. ಸಣ್ಣ ಇಂಜುರಿಯಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.ಆತನ ಆರೋಗ್ಯ ಸ್ಥಿರವಾಗಿದೆ. ಶೀಘ್ರ ಚೇತರಿಸಿಕೊಳ್ಳಲಿದ್ದಾರೆ ಎಂದರು.

ಮುಂದೆ ಯಾವುದೇ ಸಮಸ್ಯೆ ಆಗದಿರಲಿ ಎಂಬ ಕಾರಣಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆಯೇ ಹೊರತು ಬೇರೇನಲ್ಲ ಎಂದವರು ಇದೇ ವೇಳೆ ತಿಳಿಸಿದರು.