ಬೈಕ್ ಸರಿಯಾಗಿ ನಿಲ್ಲಿಸಲು ಹೇಳಿದ್ದಕ್ಕೆ ಗಾರ್ಡ್ ಕೊಲೆ: ಫುಡ್ ಡೆಲಿವರಿ ಬಾಯ್ ಸೆರೆ
.webp)

ಬೆಂಗಳೂರು: ಫುಡ್ ಡೆಲಿವರಿ ಬಾಯ್‌ನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಅಪಾರ್ಟ್‌ಮೆಂಟ್‌ವೊಂದರ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.
ಕುಮಾರ್ ನಾಯಕ್ (46) ಮೃತ ಸೆಕ್ಯೂರಿಟಿ ಗಾರ್ಡ್. ಕೃತ್ಯ ಎಸಗಿದ ಕಾರ್ತಿಕ್‌ನನ್ನು ಇದೀಗ ಬಂಧಿಸಲಾಗಿದೆ.
ಜೂನ್ 12ರಂದು ಕೊಡಿಗೇಹಳ್ಳಿ ಗೇಟ್ ಬಳಿ ಇರುವ ಅಪಾರ್ಟ್‌ಮೆಂಟ್‌ಗೆ ಹೋಗಿದ್ದ ಕಾರ್ತಿಕ್ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಆಹಾರ ಕೊಡಲು ಹೋಗುತ್ತಿದ್ದ. ಆಗ ಸೆಕ್ಯೂರಿಟಿ ಗಾರ್ಡ್, ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದಿಯಾ ಸರಿಯಾಗಿ ನಿಲ್ಲಿಸುವಂತೆ ಹೇಳಿದ್ದಾರೆ. ಆದರೂ ಆರೋಪಿ ಹಾಗೆಯೇ ಹೋಗಿದ್ದಾನೆ. ಹೀಗಾಗಿ ಕುಮಾರ್ ನಾಯಕ್ ಖುದ್ದು ಬೈಕ್ ನಿಲ್ಲಿಸಲು ಹೋದಾಗ ನಿಯಂತ್ರಣ ತಪ್ಪಿ ಬೈಕ್ ಕೆಳಗೆ ಬಿದ್ದಿದ್ದೆ. ಅದರಿಂದ ಕೋಪಗೊಂಡಂತಹ ಕಾರ್ತಿಕ್ ಸೆಕ್ಯೂರಿಟಿ ಗಾರ್ಡ್‌ಗೆ ನಿಂದಿಸಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಮನಬಂದಂತೆ ಹೊಡೆದಿದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸೆಕ್ಯೂರಿಟಿ ಗಾರ್ಡ್‌ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗುರುವಾರ ಬೆಳಗ್ಗೆ ಚಿಕಿತ್ಸೆಯು ಫಲಕಾರಿಯಾಗದೆ ಕುಮಾರ್ ನಾಯಕ್ ಮೃತಪಟ್ಟಿದ್ದಾರೆ.