ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಲ್ಲಿ QUICKZ-2021 ನ ಸದುಪಯೋಗವನ್ನು ಪಡೆದ ವಿದ್ಯಾರ್ಥಿಗಳು.


ಉಡುಪಿ ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಇಂದಿರಾ ಶಿವರಾವ್ ಪಾಲಿಟೆಕ್ನಿಕ್, ಮೂಡು ಪೆರಂಪಳ್ಳಿ,ಉಡುಪಿ ಇವರು ಆಯೋಜಿಸಿರುವ QUICKZ- 2021ರ ಮೂಲಕ GOOGLE FORMS, PHOTOSHOP, MACROMEDIA FLASH (BASIC ANIMATION), BASIC COMPUTER SKILLS (MS WORD, EXCEL,POWER POINT),HAND EMBROIDERY,ಸೀರೆಗೆ ಕುಚ್ಚು ಹಾಕುವುದು,ಪೇಪರ್ ಬ್ಯಾಗ್ ಮತ್ತು ಕ್ರಾಫ್ಟ್ ತಯಾರಿಕೆಯ ಬಗ್ಗೆ ಉಚಿತ ಆನ್ಲೈನ್ ತರಬೇತಿಯ ಶಿಬಿರವನ್ನುಆಯೋಜಿಸಿದ್ದು ಇದರ ಸದುಪಯೋಗವನ್ನು ನೂರಕ್ಕೂ ಅಧಿಕ ಮಂದಿ ಪಡೆದುಕೊಂಡಿರುತ್ತಾರೆ
ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ "ಕೃಷ್ಣಾಪುರ ಮಠ"ದ ಶ್ರೀ ಕೃಷ್ಣ ಶಿಕ್ಷಣ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಸುಮಾರು 25 ವರ್ಷಗಳಿಂದ ನಡೆಸುತ್ತಿರುವ "ಇಂದಿರಾ ಶಿವ ರಾವ್ ಪಾಲಿಟೆಕ್ನಿಕ್" ಶಿಕ್ಷಣದಲ್ಲಿ ಆಧುನಿಕ ಗುಣಮಟ್ಟ ಹಾಗೂ ಶಿಸ್ತು ಬದ್ಧ ತಾಂತ್ರಿಕ ಶಿಕ್ಷಣಕ್ಕೆ ತನ್ನದೇ ಛಾಪು ಮೂಡಿಸಿದೆ.ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಆಂಡ್ ಎಂಜಿನಿಯರಿಂಗ್,ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್,ಮೆಕ್ಯಾನಿಕಲ್ ಎಂಜಿನಯರಿಂಗ್ ವಿಭಾಗ ಹಾಗೂ ಅಪಾರೆಲ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ ಟೆಕ್ನಾಲಜಿ ವಿಭಾಗ ಕೂಡ ಲಭ್ಯವಿದೆ.
ಪ್ರಸ್ತುತ ಕಾಲೇಜಿನ ದಾಖಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಹೆಚ್ಚಿನ ವಿವರಗಳು ಕಾಲೇಜ್ ನ ವೆಬ್ಸೈಟ್ : wwww.isrpolytechnic.com ನಲ್ಲಿ ಲಭ್ಯವಿದೆ.ಅಥವಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪವಿತ್ರ.ಡಿ(7899477971) ಇವರನ್ನು ಸಂಪರ್ಕಿಸಬಹುದು.