•   Wednesday, 22 Mar, 2023
Lord Rama

ಶ್ರೀರಾಮನವರಾತ್ರೋತ್ಸವದ ಚಿಂತನೆ

Generic placeholder image
  Vishwapriya News

ಶ್ರೀರಾಮಚಂದ್ರದೇವರಲ್ಲಿ ಅನಂತ ಗುಣಗಳಿವೆ. ಸಾವಿರ ಕಣ್ಣುಗಳಿರುವ ಇಂದ್ರದೇವರು ಆ ಗುಣಗಳನ್ನು ತಿಳಿಯಲು ಅಸಮರ್ಥರು. ಸಾವಿರ ಮುಖವಿರುವ ಶೇಷದೇವರು ಕೂಡ ತಿಳಿಯಲು ಅಸಮರ್ಥರು. ಜಗತ್ತಿನ ಗುರುವಾದ ಚತುರ್ಮುಖ ಬ್ರಹ್ಮ ದೇವರು ಕೂಡ ಆ ರಾಮಚಂದ್ರ ನ ಗುಣಗಳನ್ನು ಪೂರ್ಣ ತಿಳಿಯುವಲ್ಲಿ ಸೋತಿದ್ದಾರೆ. ಹೀಗಿರುವಾಗ ಇಂತಹ ರಾಮಚಂದ್ರನ ಮಹಿಮೆಯನ್ನು ಮನುಷ್ಯರು ಎಷ್ಟು ವರ್ಣಿಸಬಲ್ಲರು? 

ಎಷ್ಟು ವರ್ಣಿಸಿದರೂ ಕಡಿಮೆ, ಅನಂತ ಗುಣಗಳ ಸಮುದ್ರ ಶ್ರೀರಾಮಚಂದ್ರದೇವರು. 

ಇದು ಶ್ರೀನಾರಾಯಣ ಪಂಡಿತಾಚಾರ್ಯರು ಸಂಗ್ರಹರಾಮಾಯಣಗ್ರಂಥದಲ್ಲಿ ಶ್ರೀರಾಮನನ್ನು ಸ್ತುತಿಸಿದ ಮಾತು. 

ಇಂತಹ ಶ್ರೀಸೀತಾಶ್ರೀರಾಮಚಂದ್ರದೇವರ ಅನುಗ್ರಹದಿಂದ, ಸಜ್ಜನರಿಗೆ ಸುಖವಾಗಲಿ. ದುರ್ಜನರು ದೂರವಾಗಲಿ. ಜ್ಞಾನ ಭಕ್ತಿ ವೈರಾಗ್ಯಗಳು ಅಭಿವೃದ್ಧಿ ಆಗುವಂತೆ ಅವರು ಅನುಗ್ರಹ ಮಾಡಲಿ. 

ಸಿಂಹಾಸನದಲ್ಲಿ ಶ್ರೀರಾಮಚಂದ್ರದೇವರು ಕುಳಿತಿದ್ದಾರೆ. ಜೊತೆಗೆ ಸೀತೆಯನ್ನು ಕೂಡಿಸಿಕೊಂಡಿದ್ದಾರೆ. ರಾಜರಿಗೂ ರಾಜನಾಗಿ ಶೋಭಿಸುತ್ತಿದ್ದಾರೆ. ಕಮಲದಂತಹ ಕಣ್ಣು, ಲಕ್ಷಣಭರಿತವಾದ ಅಂಗಾಂಗಗಳಲ್ಲಿ ನಾನಾವಿಧವಾದ ಆಭರಣಗಳನ್ನು ಧರಿಸಿ, ಆಭರಣಗಳಿಗೆ ಮತ್ತಷ್ಟು ಶೋಭೆಯನ್ನು ಹೆಚ್ಚಿಸುತ್ತಿದ್ದಾರೆ. 

ಇಂತಹ ರಾಜಾಧಿರಾಜರಾದ ಶ್ರೀರಾಮದೇವರು ನೋಡುವವರ ಕಣ್ಣು ಹಾಗೂ ಮನಸ್ಸು ಗಳಿಗೆ ಒಂದು ಮಹೋತ್ಸವದಂತೆ ಇದ್ದರು. 

ಇದು ಶ್ರೀನಾರಾಯಣ ಪಂಡಿತಾಚಾರ್ಯರು ಸಂಗ್ರಹರಾಮಾಯಣಗ್ರಂಥದಲ್ಲಿ ಶ್ರೀರಾಮನನ್ನು ಸ್ತುತಿಸಿದ ಮಾತು. 

ಇಂತಹ ಶ್ರೀಸೀತಾಶ್ರೀರಾಮಚಂದ್ರದೇವರ ಅನುಗ್ರಹದಿಂದ, ಸಜ್ಜನರಿಗೆ ಸುಖವಾಗಲಿ. ದುರ್ಜನರು ದೂರವಾಗಲಿ. ಜ್ಞಾನ ಭಕ್ತಿ ವೈರಾಗ್ಯಗಳು ಅಭಿವೃದ್ಧಿ ಆಗುವಂತೆ ಅವರು ಅನುಗ್ರಹ ಮಾಡಲಿ. 

ಎಲ್ಲರ ಮನಸ್ಸಾಕರ್ಷಿಸುವವನು ಶ್ರೀರಾಮನು. 

ನಾಶವಿಲ್ಲದವನು ಶ್ರೀರಾಮನು. 

ಶತ್ರುಗಳನ್ನು ನಾಶಪಡಿಸುವವನು ಶ್ರೀರಾಮನು. 

ಲಕ್ಷ್ಮೀಮನೋಹರನಾದವನು ಶ್ರೀರಾಮನು. 

ಹೀಗೆ ನಾನಾ ವಿಧವಾದ ಶ್ರೀರಾಮನ ಮಹಿಮೆಯನ್ನು ಹೇಳುತ್ತಾ, ರಾಮರಾಜ್ಯದಲ್ಲಿ ಶ್ರೀರಾಮನ ಭಕ್ತರು, ಶ್ರೀರಾಮನಾಮ ಸ್ಮರಣೆಯನ್ನು ಮಾಡುತ್ತಿದ್ದರು. 

ಇದು ಶ್ರೀನಾರಾಯಣ ಪಂಡಿತಾಚಾರ್ಯರು ಸಂಗ್ರಹರಾಮಾಯಣಗ್ರಂಥದಲ್ಲಿ ಶ್ರೀರಾಮನನ್ನು ಸ್ತುತಿಸಿದ ಮಾತು. 

ಇಂತಹ ನಾರಾಯಣಾವತಾರಿಯಾದ ಶ್ರೀರಾಮಚಂದ್ರದೇವರ ಅನುಗ್ರಹದಿಂದ, ಸಜ್ಜನರಿಗೆ ಸುಖವಾಗಲಿ. ದುರ್ಜನರು ದೂರವಾಗಲಿ. ಜ್ಞಾನ ಭಕ್ತಿ ವೈರಾಗ್ಯಗಳು ಅಭಿವೃದ್ಧಿ ಆಗುವಂತೆ ಅವರು ಅನುಗ್ರಹ ಮಾಡಲಿ. 

ಹೇ ಶ್ರೀರಾಮನೇ, ನಾವು ನಿನ್ನ ಕೀರ್ತಿಯನ್ನು ಪಾಡುವೆವು. ನಿನ್ನ ಮಹಿಮೆಯನ್ನು ಕೇಳುವೆವು. ನಿನ್ನ ಪಾದಗಳನ್ನು ಧ್ಯಾನಿಸುವೆವು. ನಿನ್ನನ್ನು ಭಜಿಸುವೆವು. ನಿನ್ನ ಪ್ರತೀಕಗಳನ್ನು ಪೂಜಿಸುವೆವು. ನಿನಗೆ ನಮಿಸುವೆವು. 

ನಾವೆಲ್ಲರೂ ಶ್ರೀರಾಮನೇ ನಿನ್ನ ದಾಸರು. ನಿನ್ನನ್ನೇ ಅನುಸರಿಸುವೆವು. 

ಹೀಗೆ ಶ್ರೀರಾಮನ ಭಕ್ತರು, ಅತ್ಯಂತ ಭಕ್ತಿಯಿಂದ ಶ್ರೀರಾಮನ ಪ್ರಾರ್ಥನೆಯನ್ನು ಮಾಡುತ್ತಾ, ಅವನ ಸೇವೆಯನ್ನು ಮಾಡುತ್ತಿದ್ದರು. 