•   Wednesday, 22 Mar, 2023
mangalore vhp bhajarangadala

ಮಂಗಳೂರು: ಅಕ್ರಮ ಗೋ ಸಾಗಾಟ - ಮೂವರ ಬಂಧನ

Generic placeholder image
  Vishwapriya News

ಮಂಗಳೂರು, ಜೂನ್ 24 : ದನಗಳನ್ನು ಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬಜಪೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಪುತ್ತಿಗೆ ಹಂಡೇಲು ಜರೀನಾ ಮಂಜಿಲ್‌ನ ಅಬ್ದುಲ್‌ ಫಾರೂಕ್‌ (41), ಬಡಗ ಮಿಜಾರಿನ ಅಬೂಬಕ್ಕರ್‌ (45), ತೋಡಾರು ದರ್ಖಾಸ್‌ ಹೌಸ್‌ ಶಿವ (60) ಎಂಬುದಾಗಿ ಗುರುತಿಸಲಾಗಿದೆ.

ಜೂನ್ 22 ರಂದು ಬಜ್ಪೆ ಸಮೀಪದ ಬಡಗ ಎಡಪದವು ಗ್ರಾಮ ಪಂಚಾಯತ್‌ ವ್ಯಾಪ್ತಿಯ ದಡ್ಡಿ ಕ್ರಾಸ್‌ ಬಳಿ ಪಿಕ್‌ ಅಪ್‌ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿದ್ದಾರೆ.

ಪೊಲೀಸರು ನಾಲ್ಕು ಹಸುಗಳು ಮತ್ತು ಪಿಕ್ ಅಪ್ ವಾಹನವನ್ನು ಜಪ್ತಿ ಮಾಡಿದ್ದು, ವಾಹನ ಮತ್ತು ಹಸುಗಳ ಒಟ್ಟು ವೆಚ್ಚ ನಾಲ್ಕು ಲಕ್ಷ ರೂಪಾಯಿ ಎಂಬುದಾಗಿ ಅಂದಾಜಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಬಜಪೆ ಪೊಲೀಸ್‌ ಠಾಣಾ ಪಿಎಸ್‌ಐ ಗಳಾದ ಪೂವಪ್ಪ, ಗುರುವಪ್ಪ ಶಾಂತಿ, ಕಮಲ, ಎ.ಎಸ್‌.ಐ ರಾಮ ಪೂಜಾರಿ ಮೇರಮಜಲು, ಹೆಚ್‌ಸಿ ಸಂತೋಷ ಡಿ.ಕೆ.ಸುಳ್ಯ, ಸಿಬಂದಿಗಳಾದ ರಶೀದ್‌ ಶೇಖ್‌,ವಿನೋದ್‌,ಸಂಜೀವ ಭಜಂತ್ರಿ ಪಾಲ್ಗೊಂಡಿದ್ದರು