•   Wednesday, 22 Mar, 2023
viral video

ಸರಯೂ ನದಿಯಲ್ಲಿ ಪತಿಪತ್ನಿ ರೊಮ್ಯಾನ್ಸ್ .ಪತಿಗೆ ಬಿತ್ತು ಧರ್ಮದೇಟು….!!

Generic placeholder image
  Vishwapriya News

ಲಕ್ನೋ , ಜೂನ್ 23:ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುವಾಗ ಪತ್ನಿಗೆ ಲಿಪ್ ಕಿಸ್ ಕೊಟ್ಟ ಪತಿಯನ್ನು ಸಾರ್ವಜನಿಕರು ಥಳಿಸಿರುವ ಘಟನೆಯೊಂದು ನಡೆದಿದ್ದು, ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ಭಾರಿ ವೈರಲ್ ಆಗಿದೆ.

ಸರಯೂ ನಗಿ ಗಂಗೆಯ ಏಳು ಉಪನದಿಗಳಲ್ಲಿ ಒಂದಾಗಿದ್ದು, ಹಿಂದೂಗಳ ಇದನ್ನು ಪವಿತ್ರ ಎಂದು ಪರಗಿಣಿಸುತ್ತಾರೆ. ಅಲ್ಲದೆ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಸರಯೂ ನದಿಯ ದಡದಲ್ಲಿದೆ. ಇಲ್ಲಿ ಸ್ನಾನಕ್ಕಿಳಿದು ಪತಿ ಪತ್ನಿ ಇಬ್ಬರು ಸ್ವಲ್ಪ ಸಮಯದ ನಂತರ ಕಿಸ್ ಮಾಡಲು ಹೋಗಿದ್ದಾರೆ. ಇದನ್ನು ನೋಡಿದ ಸುತ್ತಮುತ್ತಲಿನ ಜನರು ಪತಿಯನ್ನು ಎಳೆದೊಯ್ದು ಥಳಿಸಿದ್ದಾರೆ. ಅಲ್ಲದೆ ಅಯೋಧ್ಯೆಯಲ್ಲಿ ಇಂತಹ ಅಸಹ್ಯವನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದು ಕೂಡ ವೀಡಿಯೋದಲ್ಲಿದೆ.

ಥಳಿತದ ಸಂದರ್ಭದಲ್ಲಿ ತನ್ನ ಪತಿಯನ್ನು ರಕ್ಷಿಸಲು ಪತ್ನಿಯು ಮುಂದಾಗಿದ್ದಾರೆ. ನಂತರ ಅಲ್ಲಿದ್ದ ಜನರು ಆ ದಂಪತಿಯನ್ನು ನದಿಯಿಂದ ಹೊರಗೆ ಕಳುಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಯೋಧ್ಯಾ ಪೊಲೀಸರು ತಿಳಿಸಿದ್ದಾರೆ