•   Wednesday, 22 Mar, 2023
NITK SURATHKAL TOLL GATE

ನಿತಿನ್ ಗಡ್ಕರಿ ಗಡುವು ಮುಗಿದರೂ ಕಾರ್ಯಾಚರಿಸುತ್ತಿರುವ ಸುರತ್ಕಲ್ ಟೋಲ್ ಗೇಟ್

Generic placeholder image
  Vishwapriya News

ಮಂಗಳೂರು: 60 ಕಿಲೋ ಮೀಟರ್ ಅಂತರದಲ್ಲಿರುವ ಟೋಲ್ ಗೇಟ್ ಗಳನ್ನು ಬಂದ್ ಮಾಡುವುದಾಗಿ ಹೇಳಿಕೆ ನೀಡಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಡುವು ಮುಗಿದಿದ್ದರೂ ಮಂಗಳೂರು ಹೊರವಲಯದ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಟೋಲ್ ಸಂಗ್ರಹ ಇನ್ನೂ ಕೂಡ ಮುಂದುವರಿದಿದೆ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಆರೋಪಿಸಿದೆ.

ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ಡಾ. ವೈ. ಭರತ್‌ ಶೆಟ್ಟಿ ಅವರಿಗೆ ಕೊಟ್ಟ ಮಾತಿನಂತೆ ಟೋಲ್‌ಗೇಟ್ ತೆರವುಗೊಳಿಸಲು ಆಗಲಿಲ್ಲ. ಪ್ರಸ್ತುತ ಇನ್ನೊಂದು ಅವಕಾಶ ಇದ್ದು, ಸುರತ್ಕಲ್ ಟೋಲ್ ಸಂಗ್ರಹ ಗುತ್ತಿಗೆ ಇನ್ನೊಂದು ವಾರದಲ್ಲಿ ಮುಗಿಯುತ್ತದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಗುರುವಾರ (ಜೂನ್‌ 23) ಟೆಂಡರ್ ತೆರೆಯಲಾಗುತ್ತದೆ. ಲಭ್ಯ ಮಾಹಿತಿಯಂತೆ ಯಾವ ಗುತ್ತಿಗೆದಾರನೂ ಟೋಲ್ ಸಂಗ್ರಹ ಗುತ್ತಿಗೆ ಪಡೆಯಲು ಅರ್ಜಿ ಹಾಕಿಲ್ಲ. ಈ ಸಂದರ್ಭದಲ್ಲಿ ಸುರತ್ಕಲ್ ಟೋಲ್ ಕೇಂದ್ರವನ್ನು ಬಂದ್ ಮಾಡಬಹುದು’ ಎಂದು ಸಲಹೆ ನೀಡಿದೆ