•   Wednesday, 25 May, 2022
ಬೈಂದೂರು ಗೋಹತ್ಯೆಯ ವಿಡಿಯೋ

ಬೈಂದೂರು: ಗೋಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ - ಪ್ರಕರಣ ದಾಖಲು

Generic placeholder image
  Vishwapriya News

ಬೈಂದೂರು, ಸೆಪ್ಟೆಂಬರ್.27 : ಗೋಹತ್ಯೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತಹ ಆರೋಪದ ಮೇಲೆ ಕೆಲವು ವ್ಯಕ್ತಿಗಳ ಮೇಲೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಇದೀಗ ಪ್ರಕರಣವು ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ಮೇಲೆ ಪ್ರಕರಣವು ದಾಖಲಾಗಿದೆ. ಜಾನುವಾರುಗಳನ್ನು ಕದ್ದು ಹಿಂಸಾತ್ಮಕ ರೀತಿಯಲ್ಲಿ ಹತ್ಯೆಯನ್ನು ಮಾಡಲಾಗಿದೆ. ಗೋಹತ್ಯೆಯನ್ನು ಮಾಡಿದ ವಿಡಿಯೋವನ್ನು ಸೆಪ್ಟೆಂಬರ್.24ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಲಾಗಿದೆ. ಕೋಮುಗಲಭೆಯನ್ನು ಆರಂಭಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಈ ಗೋಹತ್ಯೆಯನ್ನು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾಲಿ ರಿಜ್ವಾನ್, ಮೌಲ್ವಿ, ಉರ್ದು ಶಾಲೆಯ ಮುಖ್ಯಸ್ಥ, ಮೌಲ್ಲಾನ ಹಾಡಿ, ಇಲಿಯಾಸ್, ಮಾಲಿ ಸುಭಾನ್, ಅಬು ಸಲಿ, ಅಬ್ದುಲ್ ರಜಾಕ್, ಮಜೀದ್ ಅಲಿಯಾಸ್ ಫಿಟ್ಟರ್ ಮಜೀದ್, ಮೊಹಮ್ಮದ್ ಇಬ್ರಾಹಿಂ, ಇಮಾಮ್ ಶೇಖ್ ಹಾಗೂ ಇತರರನ್ನು ಆರೋಪಿಗಳು ಎಂದು ಇದೀಗ ಗುರುತಿಸಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ