•   Wednesday, 22 Mar, 2023
banglore basavaraj bommai tested positive

ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್

Generic placeholder image
  Vishwapriya News

ಬೆಂಗಳೂರು ಜನವರಿ 11: ಕೊರೊನಾ 3 ನೇ ಅಲೆಯು ಜೊರಾಗಿ ಇದ್ದು, ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೊರೊನಾ ಸೊಂಕು ಇದೀಗ ಕಾಣಿಸಿಕೊಂಡಿದೆ.

ಟ್ವಿಟರ್ ನಲ್ಲಿ ಈ ಕುರಿತಂತೆ ಮಾಹಿತಿಯನ್ನು ನೀಡಿರುವ ಅವರು ಸೌಮ್ಯ ಲಕ್ಷಣಗಳು ಇದ್ದದ್ದರಿಂದ ಕೊರೊನಾ ಪರೀಕ್ಷೆಯನ್ನು ಮಾಡಿಸಿದೆ. ವರದಿಯಲ್ಲಿ ಪಾಸಿಟಿವ್‌ ಬಂದಿದೆ. ನಾನು ಆರೋಗ್ಯವಾಗಿದ್ದೇನೆ. ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್‌ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಹಾಗೂ ಸ್ವಯಂ ಐಸೊಲೇಟ್‌ ಆಗಿ ಎಂದು ಸಿಎಂ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಇಂದು ಮುಖ್ಯಮಂತ್ರಿಗಳು ಆರೋಗ್ಯ ಕಾರ್ಯಕರ್ತರು ಹಾಗೂ ಅಗತ್ಯ ಇರುವ ಹಿರಿಯರಿಗೆ ನೀಡುವ ಬೂಸ್ಟರ್ ಡೋಸ್ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೇ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅವರ ಅಂತ್ಯಕ್ರಿಯೆಯಲ್ಲೂ ಕೂಡ ಭಾಗಿಯಾಗಿದ್ದರು. ಆರೋಗ್ಯ ಸಚಿವ ಸುಧಾಕರ್, ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಪ್ರಾಥಮಿಕ‌ ಸಂಪರ್ಕಿತರಾಗಿದ್ದಾರೆ. ಅಷ್ಟೇ ಅಲ್ಲದೇ ಆಡಳಿತ ಸುಧಾರಣಾ ಸಂಬಂಧ ಅಧಿಕಾರಿಗಳೊಂದಿಗೆ ಸಿಎಂ ಸಭೆ ಕೂಡ ನಡೆಸಿದ್ದರು. ಇದೀಗ ಎಲ್ಲರೂ ಐಸೋಲೇಟ್ ಆಗುವ ಸಾಧ್ಯತೆ ಹೆಚ್ಚಾಗಿ ಇದೆ