Shocking News : ಬೆಳಗಾವಿಯಲ್ಲಿ ಮಾಲೀಕನಿಂದಲೇ ತೋಟದಲ್ಲಿ ಕೆಲಸಕ್ಕಿದ ಮಹಿಳೆ ಮೇಲೆ ಅತ್ಯಾಚಾರ!


Vishwapriya News
ಬೆಳಗಾವಿ : ತೋಟದಲ್ಲಿ ಕೆಲಸಕ್ಕಿದ್ದಂತಹ ಮಹಿಳೆಯ ಮೇಲೆ ಮಾಲೀಕನೇ ಅತ್ಯಾಚಾರವನ್ನು ಎಸಗಿರುವ ಘಟನೆಯೊಂದು ಬೆಳಗಾವಿ ಜಿಲ್ಲೆಯ ಗೋಕಾಕ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೆಪ್ಟೆಂಬರ್ 17ರಂದು ರಾತ್ರಿಯ ವೇಳೆ ಮಾಲೀಕನು ಮಹಿಳೆಯ ಮೇಲೆ ಅತ್ಯಾಚಾರವನ್ನು ಎಸಗಿದ್ದಾನೆ. ಸಂತ್ರಸ್ತೆಯು ಆರೋಪಿಯ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದ್ದು, ಸಂತ್ರಸ್ತೆಯ ಪತಿ ಮನೆಯಿಂದ ಹೊರ ಹೋದಾಗ ಮಾಲೀಕನು ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವು ಕೇಳಿ ಬಂದಿದೆ.
ಸದ್ಯ ಸಂತ್ರಸ್ತೆ ಮಹಿಳೆ ಗೋಕಾಕ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾಳೆ. ಅತ್ಯಾಚಾರವೆಸಗಿದ್ದ ಆರೋಪಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.