ಐ.ಪಿ.ಎಲ್ ಮ್ಯಾಚ್ ಮುಗಿದ ನಂತರ ರಾತ್ರಿ ನಮ್ಮನ್ನು ಮಾಂಸದ ತುಂಡುಗಳಂತೆ ಟ್ರೀಟ್ ಮಾಡಿದ್ರು: ಐಪಿಎಲ್ ಪಾರ್ಟಿಗಳ ರಾತ್ರಿ ರಹಸ್ಯ ಬಿಚ್ಚಿಟ್ಟ ಚಿಯರ್ಗರ್ಲ್!


ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ನಂತರ ರಾತ್ರಿಯ ವೇಳೆ ನಡೆಯುವಂತಹ ಪಾರ್ಟಿಗಳ ಬಗ್ಗೆ ದಕ್ಷಿಣ ಆಫ್ರಿಕಾ ಮೂಲದ ಚಿಯರ್ ಗರ್ಲ್ ಗೇಬ್ರಿಯೆಲಾ ಪಾಸ್ಕ್ವಾಲೊಟ್ಟೊ ಎನ್ನುವವರು ಶಾಕಿಂಗ್ ಸಂಗತಿಗಳನ್ನು ತಮ್ಮ ಟ್ವೀಟರ್ ನಲ್ಲಿ ಬಿಚ್ಚಿಟ್ಟಿದ್ದಾರೆ.
ಪಂದ್ಯದ ನಂತರದ ಪಾರ್ಟಿಗಳಲ್ಲಿ ಕ್ರಿಕೆಟಿಗರು ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಗೇಬ್ರಿಯೆಲಾ ಆರೋಪಿಸಿದ್ದಕ್ಕೆ ಮುಂಬೈ ತಂಡದ ಚಿಯರ್ ಲೀಡರ್ಸ್ ತಂಡದಿಂದ ಅವರನ್ನು ಹೊರಗಿಡಲಾಗಿತ್ತು. ಈ ವಿಷಯ ಎಲ್ಲಾ ಕಡೆ ಭಾರಿ ಸುದ್ದಿಯಾಗಿತ್ತು.ಇಷ್ಟಲ್ಲದೆ, ವಜಾಗೊಳಿಸಿದ ಬೆನ್ನಲ್ಲೇ ಟ್ವೀಟ್ ಮಾಡುವ ಮೂಲಕ ಐ.ಪಿ.ಎಲ್ ಮ್ಯಾನೇಜ್ಮೆಂಟ್ ನ ಬಗ್ಗೆ ಕೂಡ ಗೇಬ್ರಿಯೆಲಾ ಇವರು ವಿಷ ಕಾರಿದ್ದರು.
ಗೇಬ್ರಿಯೆಲಾರನ್ನು ವಜಾಗೊಳಿಸಿ ಆಫ್ರಿಕಾಗೆ ವಾಪಸ್ ಕಳುಹಿಸಿದ ಬಳಿಕ ಈಕೆ ತನ್ನ @Iplgirl ಟ್ವಿಟರ್ ಖಾತೆಯಲ್ಲಿಯೂ ಐ.ಪಿ.ಎಲ್ ನ ಕುರಿತು ಬರೆದುಕೊಂಡಿದ್ದಾರೆ.
ಐಪಿಎಲ್ ಮತ್ತು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಗೇಬ್ರಿಯೆಲಾ ರ ವಿಷಯದಲ್ಲಿ ಮೂಕರಾಗಿರಲು ನಿರ್ಧಿರಿಸಿತ್ತು. ಆದರೆ, ಗೇಬ್ರಿಯೆಲಾಗೆ ಇತರ ಚಿಯರ್ ಲೀಡರ್ಗಳ ಬೆಂಬಲವು ಇರುವುದರಿಂದ ಈ ವಿಚಾರವು ಈಗ ಬೆಳಕಿಗೆ ಬಂದಿದೆ. ರಾತ್ರಿಯ ಪಾರ್ಟಿ ವೇಳೆ ಕ್ರಿಕೆಟಿಗರು ನಮ್ಮನ್ನು ಒಂದು ಮಾಂಸದ ತುಣುಕುಗಳಂತೆ ನಮ್ಮೊಡನೆ ವರ್ತಿಸುತ್ತಿದ್ದರು. ಅವರು ಕುಡಿದ ನಂತರ ಅಮಲಿನಲ್ಲಿ ಆರಾಮವಾಗಿ ನಮ್ಮನ್ನು ಸ್ಪರ್ಶಿಸಿ, ಅನುಚಿತವಾಗಿ ನಮ್ಮೊಡನೆ ವರ್ತಿಸುತ್ತಿದ್ದರು. ನಾವು ಸುಲಭವಾಗಿ ದೊರೆಯುತ್ತೇವೆ ಎಂದು ಅವರೆಲ್ಲಾ ಭಾವಿಸಿದ್ದಾರೆ ಎಂದು ಗೇಬ್ರಿಯೆಲಾ ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ಆಕೆಯ ಧ್ವನಿಗೆ ಮಿಸ್ಟರ್ ಲಿಕ್ಸ್ ಎಂಬುವವರು ಕೂಡ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
@IPLGirl ಎಂಬ ಟ್ವಿಟರ್ ಖಾತೆಯಿಂದ ಐ.ಪಿ.ಎಲ್ ನ ಅನುಭವಗಳನ್ನು ಟ್ವೀಟ್ ಮಾಡುವಾಗ ಗೇಬ್ರಿಯೆಲಾ ಮೊದಲು ಎಲ್ಲರ ಗಮನವನ್ನು ಸೆಳೆದಿದ್ದರು. ಇದಾದ ಬಳಿಕ ಅವರು ಅನಾಮಧೇಯ ಬ್ಲಾಗ್ ಒಂದನ್ನು ಬರೆಯಲು ಆರಂಭಿಸಿದ್ದು, ಅದರಲ್ಲಿ ಕ್ರಿಕೆಟಿಗರು ಮತ್ತು ಐ.ಪಿ.ಎಲ್ ನಲ್ಲಿ ನಡೆಯುವ ಪಾರ್ಟಿಗಳ ಬಗ್ಗೆ ಕೂಡ ಬರೆದಿದ್ದಾರೆ. ಆಕೆಯ ಈ ನಡೆಯಿಂದಲೇ ಆಕೆಯನ್ನು ಐ.ಪಿ.ಎಲ್ ನಿಂದ ವಜಾಗೊಳಿಸಿ ಮನೆಗೆ ಕಳುಹಿಸಲಾಗಿದೆ ಎಂದು ಚಿಯರ್ ಲೀಡರ್ ಒಬ್ಬರು ಮಾಹಿತಿ ನೀಡಿದ್ದಾರೆ.