BIG BREAKING NEWS : ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ : ಸಿಲಿಂಡರ್ ಸ್ಪೋಟಗೊಂಡು ಮೂವರು ಸಾವು, ಇಬ್ಬರಿಗೆ ಗಾಯ


Vishwapriya News
ಬೆಂಗಳೂರು : ನಗರದ ಅಪಾರ್ಮೆಂಟ್ ನಲ್ಲಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡ ಪ್ರಕರಣವೊಂದು ಹಸಿಯಾಗಿರೋ ಮುನ್ನವೇ, ಇದೀಗ ಮತ್ತೊಂದು ಘೋರ ದುರಂತವೊಂದು ಸಂಭವಿಸಿದೆ. ಸಿಲಿಂಡರ್ ಸ್ಪೋಟಗೊಂಡು ಮೂವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರೋ ಘಟನೆಯೊಂದು ಇಂದು ನಡೆದಿದೆ.
ಚಾಮರಾಜಪೇಟೆಯ ರಾಯನ್ ಸರ್ಕಲ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮೂವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರೋ ಘಟನೆಯು ಇಂದು ನಡೆದಿದೆ. ಇದರಿಂದಾಗಿ ರಾಜಧಾನಿಯ ಜನರು ಒಮ್ಮೆ ಬೆಚ್ಚಿ ಬೀಳುವಂತೆ ಆಗಿದೆ.
ಎರಡು ದಿನಗಳ ಹಿಂದಷ್ಟೇ ದೇವರಚಿಕ್ಕನಹಳ್ಳಿಯ ಅಪಾರ್ಮೆಂಟ್ ಒಂದರಲ್ಲಿ ಬೆಂಕಿಯು ಹೊತ್ತಿಕೊಂಡು ಇಬ್ಬರು ಸಾವನ್ನಪ್ಪಿದ್ದ ಘಟನೆಯೊಂದು ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣವು ಚಾಮರಾಜಪೇಟೆಯ ರಾಯನ್ ಸರ್ಕಲ್ ನಲ್ಲಿ ಇಂದು ನಡೆದಿದೆ. ಈ ಘೋರದುರಂತದಲ್ಲಿ ಮೂವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವುದಾಗಿ ಈಗ ತಿಳಿದು ಬಂದಿದೆ.