•   Tuesday, 05 Jul, 2022
goodboy_badtroll ಕಲಬುರಗಿ ಜಿಲ್ಲೆ Cyber Crime

Cyber Crime: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು Instagram ಅಶ್ಲೀಲವಾಗಿ ಟ್ರೋಲ್​ ಮಾಡುತ್ತಿದ್ದ ಆರೋಪಿ ಬಂಧನ

Generic placeholder image
  Vishwapriya News

ಬೆಂಗಳೂರು ಸೆಪ್ಟೆಂಬರ್. 21: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದಂತಹ ಅಪ್ರಾಪ್ತೆ ಯುವತಿ ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಆಕೆಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ಇನ್ಸ್​ಸ್ಟಾಗ್ರಾಂನಲ್ಲಿ (Instagram troll) ಟ್ರೋಲ್​ ಮಾಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸಿ‌.ಇ‌.ನ್​ ಪೊಲೀಸರು ಇದೀಗ ಬಂಧಿಸಿದ್ದಾರೆ. ಬಂಧಿತನನ್ನು ಕಲಬುರಗಿ ಮೂಲದ ಅವಿನಾಶ್​ ಎಂದು ಗುರುತಿಸಲಾಗಿದೆ ‌.ಲಾಕ್​​ಡೌನ್​ನಲ್ಲಿ (Lockdown) ಕೆಲಸ ಕಳೆದುಕೊಂಡಿದ್ದ ಈ ಆರೋಪಿ ಯು ಟ್ರೋಲ್​ ಪೇಜ್ (Instagram Troll page)​ ಒಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದನು. ಈ ವೇಳೆಯಲ್ಲಿ ಇನ್ಸ್ಟಾಗ್ರಾಂನಲ್ಲಿ ಯುವತಿಯ ತಾಯಿಗೆ ಫ್ರೆಂಡ್ ರಿಕ್ವೆಸ್ಟ್​ ಕೂಡ ಕಳುಹಿಸಿದ್ದ. ಹೀಗೆ ಪರಿಚಯವಾದಾಗ ಆ ಮಹಿಳೆಯು ತನ್ನ ಮಗ ಮತ್ತು ಮಗಳ ಫೋಟೋವನ್ನು ಆರೋಪಿಯೊಂದಿಗೆ ಹಂಚಿಕೊಂಡಿದ್ದರು. ಈ ವೇಳೆ ಯುವತಿಯನ್ನು ನೋಡಿದ ಆತ ಆಕೆಯನ್ನು ಮದುವೆಯಾಗುವುದಾಗಿ ಟಾರ್ಚರ್​ ಕೂಡ ನೀಡುತ್ತಿದ್ದ. ಈ ವೇಳೆ ಆಕೆ ಒಪ್ಪದಿದ್ದಾಗ ಈ ಕೃತ್ಯವನ್ನು ಎಸಗಿದ್ದಾನೆ ಎಂಬುದು ಬಯಲಾಗಿದೆ.

ಏನಿದು ಘಟನೆ?

ಬೆಂಗಳೂರಿನಲ್ಲಿ ಎರಡು ವರ್ಷಗಳ ಕಾಲ ಎಲೆಕ್ಟ್ರಿಷಿಯನ್​ ಆಗಿ ಕೆಲಸ ನಿರ್ವಹಿಸುತ್ತಿದ್ದಂತಹ ಕಲಬುರಗಿ ಜಿಲ್ಲೆಯ ಅವಿನಾಶ್​ ಎಂಬ ಈ ಆರೋಪಿಯು ಲಾಕ್​ಡೌನ್​ ಸಮಯದಲ್ಲಿ ಕೆಲಸ ಕಳೆದುಕೊಂಡು ಊರು ಸೇರಿದ್ದನು. ಈ ವೇಳೆಯಲ್ಲಿ ಆತನ ಇನ್ಸ್ಟಾಗ್ರಾಂನ goodboy_badtroll ಎಂಬ ಪೇಜ್​ನಲ್ಲಿ ಆಡ್ಮಿನ್​ ಸಹಾಯದಿಂದ ಕೆಲಸವನ್ನು ಪಡೆದು ಟ್ರೋಲ್ ಮಾಡಲು ಆರಂಭಿಸಿದ್ದನು.

ತಾಯಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಮಗಳಿಗೆ ಗಾಳ.

ಈ ವೇಳೆ ಇನ್ಸ್ಟಾಗ್ರಾಂನಲ್ಲಿ ಬೆಂಗಳೂರಿನ ಎಚ್​‌.ಎಸ್​.ಆರ್​ ಬಡಾವಣೆ ನಿವಾಸಿ ಮಹಿಳೆಯೊಬ್ಬರನ್ನು ಫ್ರೆಂಡ್​​​ ಮಾಡಿಕೊಂಡಿದ್ದನು. ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಬಳಿಕ ಮಹಿಳೆಯೊಂದಿಗೆ ಸಿಕ್ಕಾಪಟ್ಟೆ ಚಾಟಿಂಗ್​ ನಡೆಸಿ ಈತ ಅವರೊಂದಿಗೆ ಆತ್ಮೀಯವಾಗಿದ್ದ. ಈ ವೇಳೆ ಮಹಿಳೆ ಈತನನ್ನು ನಂಬಿ ತನ್ನ ಮಕ್ಕಳ ಫೋಟೋವನ್ನು ಹಂಚಿಕೊಂಡಿದ್ದರು.

ಮಗಳ ಫೋಟೋ ಕಂಡ ತಕ್ಷಣ ಆಕೆಯ ರೂಪಕ್ಕೆ ಮರಳಾಗಿ ಆಕೆಯನ್ನು ತಾನು ಮದುವೆಯಾಗುವುದಾಗಿ ಈತ ಪೀಡಿಸುತ್ತಿದ್ದ. ಯಾವಾಗ ಮಹಿಳೆ ಇದಕ್ಕೆ ಒಪ್ಪಲಿಲ್ಲವೋ ಈ ವೇಳೆಗೆ ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದನು. ಈ ವೇಳೆ ಅಪ್ರಾಪ್ತ ಯುವತಿಯ ಇನ್ಸ್ಟಾಗ್ರಾಂ ಖಾತೆಗೆ ಕನ್ನ ಹಾಕಿ ಆಕೆಯ ಮತ್ತು ಆಕೆಯ ತಮ್ಮನ ಫೋಟೋಗಳನ್ನು ಈತ ಅಲ್ಲಿಂದ ಪಡೆದಿದ್ದ.

ಹುಟ್ಟಿದ ದಿನವೇ ಯುವತಿಗೆ ಶಾಕ್

ಈ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ತನ್ನ ಇನ್ ಸ್ಟಾಗ್ರಾಂ ಅಕೌಂಟ್ rip_abhi ಯಲ್ಲಿ ಈತ ಟ್ರೋಲ್​ ಮಾಡಿದ್ದ. ಅಷ್ಟೇ ಅಲ್ಲದೇ, ಯುವತಿ ಹುಟ್ಟಿದ ದಿನವೇ‌ ಕೆಲವು ಅಶ್ಲೀಲ ಫೋಟೋವನ್ನು ಟ್ರೋಲ್​ ಮಾಡಿ ಯುವತಿಗೆ ಶಾಕ್ ನೀಡಿದ್ದನು.

ಈ ಪ್ರಕರಣದ ಕುರಿತು ಸಂತ್ರಸ್ತ ಮಹಿಳೆಯು ಆಗ್ನೇಯ ವಿಭಾಗದ ಸಿ.ಇ.ಎನ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಯ ಸಿ.ಡಿ.ಆರ್​ ಮತ್ತು ನೆಟ್​ವರ್ಕ್​​ ಜಾಲವನ್ನು ಹಿಡಿದು ತನಿಖೆ ಕೈಗೊಂಡಾಗ ಆತ ಕಲಬುರಗಿಯಲ್ಲಿ ಇರುವುದು ಇದೀಗ ಪತ್ತೆಯಾಗಿತ್ತು.

ಆರೋಪಿಯನ್ನು ಬಂಧಿಸಿದ ಪೊಲೀಸರು ಈ ವೇಳೆ ತನಿಖೆ ನಡೆಸಿದಾಗ goodboy_badtroll ಎಂಬ ಟ್ರೋಲ್​ ಪೇಜ್​ ಮೂಲಕ ಅನೇಕರನ್ನು ಇವರು ಟ್ರೋಲ್​ ಮಾಡುತ್ತಿರುವುದು ಇದೀಗ ತಿಳಿದು ಬಂದಿತು. ಈ ವೇಳೆ ಎಲ್ಲಾ ಟ್ರೋಲ್​ ಪೇಜ್​ಗಳ ಆಡ್ಮೀನ್​ಗಳು ವಾಟ್ಸ್​ಆಪ್​ ಗ್ರೂಪ್​ ಮಾಡಿಕೊಂಡು ಅದರಲ್ಲಿ ಟ್ರೋಲ್ ಮಾಡುವ ವಿಷಯದ ಕುರಿತು ಚರ್ಚೆಯನ್ನು ನಡೆಸುತ್ತಿರುವುದು ಕೂಡ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಆರೋಪಿಗೆ ಸಹಕರಿಸಿದ ಮತ್ತೊಬ್ಬ ಆರೋಪಿಯು ತಲೆ ಮರೆಸಿಕೊಂಡಿದ್ದು, ಆತನ ಹುಡುಕಾಟಕ್ಕೆ ಪೊಲೀಸರು ಇದೀಗ ಮುಂದಾಗಿದ್ದಾರೆ.