•   Wednesday, 22 Mar, 2023
ipl 2021 mumbai indians uae

ಐ.ಪಿ.ಎಲ್‌ ಆರಂಭಕ್ಕೆ ದಿನಗಣನೆ : ಶುಕ್ರವಾರ ದುಬೈನಲ್ಲಿ ಲ್ಯಾಂಡ್ ಆಗಲಿರುವ ಹಾಲಿ ಚಾಂಪಿಯನ್ಸ್‌.

Generic placeholder image
  Vishwapriya News

ನವದೆಹಲಿ : ಚೆನ್ನೈ ಸೂಪರ್ ಕಿಂಗ್ಸ್ʼನಂತೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡ ಶುಕ್ರವಾರದಂದು ದುಬೈನಲ್ಲಿ ಇಳಿಯಲಿವೆ ಎಂದು ಮಾಹಿತಿ ಲಭ್ಯವಾಗಿದೆ. ಸೆಪ್ಟೆಂಬರ್ 19 ರಂದು ಇಂಡಿಯನ್ ಪ್ರೀಮಿಯರ್ ಲೀಗ್ʼನ 14ನೇ ಆವೃತ್ತಿಯ ಯು.ಎ.ಇ ಲಿಗ್ʼನ ಆರಂಭಿಕ ಪಂದ್ಯಗಳು ನಡೆಯಲಿವೆ.

ಎ.ಎನ್. ಐ ಜೊತೆ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಮೂಲಗಳು, ಮುಂಬೈ ಇಂಡಿಯನ್ಸ್ ಶುಕ್ರವಾರ ದುಬೈನಲ್ಲಿ ಇಳಿಯಲು ಉತ್ಸುಕವಾಗಿದೆ ಮತ್ತು ಲ್ಯಾಂಡಿಂಗ್ ಅನುಮತಿಗಾಗಿ ಕಾಯುತ್ತಿದೆ ಎಂಬುದಾಗಿ ಖಚಿತಪಡಿಸಿವೆ.

'ತಂಡವು ಸಿ.ಎಸ್.ಕೆಯಂತೆ ಯು.ಎ.ಇ ಸರ್ಕಾರದಿಂದ ಲ್ಯಾಂಡಿಂಗ್ ಅನುಮತಿಗಾಗಿ ಕಾಯುತ್ತಿದೆ .ಇದು ಎಂ‌.ಐ ಗೆ ಬಬಲ್-ಟು-ಬಬಲ್ ವರ್ಗಾವಣೆಯಾಗಲಿದೆ. ಆದ್ರೆ, ಯು.ಎ.ಇಯಲ್ಲಿ ಶಿಷ್ಟಾಚಾರಗಳ ಪ್ರಕಾರ, ಆಟಗಾರರು ಕ್ವಾರಂಟೈನ್ʼಗೆ ಒಳಗಾಗಬೇಕಾಗುತ್ತೆ. ಈಗಾಗಲೇ ಮುಂಬೈನಲ್ಲಿ ಬಬಲ್‌ನಲ್ಲಿ ಇರುವುದರಿಂದ ಇದು ಬಬಲ್-ಟು-ಬಬಲ್ ಆಗಿದೆ' ಎಂದು ಮೂಲಗಳು ತಿಳಿಸಿವೆ.