•   Tuesday, 24 May, 2022
ಮಂಗಳೂರು ಮಂಗಳೂರು ಮಹಾನಗರಪಾಲಿಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕರ್ನಾಟಕ ಹೈಕೋರ್ಟ್ latest mangalore news mangalore news

ಜನರಿಗೆ ಕಲುಶಿತ ನೀರು ಪೂರೈಕೆ – ಮಂಗಳೂರು ಮಹಾನಗರಪಾಲಿಕೆ ವಿರುದ್ದ ಕ್ರಮಕ್ಕೆ ಹೈಕೋರ್ಟ್ ನಿರ್ದೇಶನ.

Generic placeholder image
  Vishwapriya News

ಮಂಗಳೂರು ಸೆಪ್ಟೆಂಬರ್ 25: ಮಂಗಳೂರು ನಗರದ ಜನರಿಗೆ ಕಲುಷಿತ ನೀರನ್ನು ಕುಡಿಸುತ್ತಿರುವಂತಹ ಮಂಗಳೂರು ಮಹಾನಗರಪಾಲಿಕೆಯ ವಿರುದ್ದ ಕ್ರಮ ಜರುಗಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್ಪಿಸಿಬಿ) ಶುಕ್ರವಾರ ಕರ್ನಾಟಕ ಹೈಕೋರ್ಟ್ ನಿರ್ದೇಶನವನ್ನು ನೀಡಿದೆ.

ಮಂಗಳೂರಿನಲ್ಲಿ ಹರಿಯುವಂತಹ ಫಲ್ಗುಣಿಯ ಉಪನದಿ ಕಲುಷಿತವಾಗಿರುವ ಕುರಿತು ಕೆಎಸ್ಪಿಸಿಬಿ ಸಲ್ಲಿಸಿರುವಂತಹ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಸಲ್ಲಿಸಿದ್ದಂತಹ ಸಾರ್ವಜನಿಕ ಹಿತಾಸಕ್ತಿಯ ಮನವಿಯ (ಪಿಐಎಲ್) ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಮಂಗಳೂರಿನ ನಿವಾಸಿಗಳು ತ್ಯಾಜ್ಯ ಸುರಿಯುವ ಪ್ರದೇಶದಲ್ಲಿಂದ ಬರುವಂತಹ ಕಲುಷಿತ ನೀರನ್ನು ಕುಡಿಯಲು ಒತ್ತಾಯಿಸಿದಾಗ ಈ ನ್ಯಾಯಾಲಯವು ಮೂಕ ಪ್ರೇಕ್ಷಕವಾಗಿರಲು ಸಾಧ್ಯವಿಲ್ಲ ಎಂಬುದಾಗಿ ಪೀಠ ಕಟುವಾಗಿ ಹೇಳಿತು. ಅಲ್ಲದೆ ಸರಕಾರಿ ವಕೀಲರು ಮಳವೂರು ನೀರಿನ ಸಂಸ್ಕರಣಾ ಘಟಕದಲ್ಲಿ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಮುಗ್ರೋಡಿ ಕನ್ಸ್ಟ್ರಕ್ಷನ್ ಎಂಬ ಖಾಸಗಿ ಸಂಸ್ಥೆಯ ಪರೀಕ್ಷಾ ವರದಿಯನ್ನು ಪೀಠಕ್ಕೆ ಸರ್ಕಾರವೇ ಸಲ್ಲಿಸಿತು. ಆದರೆ, ಪೀಠವು ಖಾಸಗಿ ಸಂಸ್ಥೆಯ ವರದಿಯನ್ನು ನಿರಾಕರಿಸಿತ್ತು.


 ಮಂಗಳೂರು ನಗರದಲ್ಲಿ ನೀರನ್ನು ವಿಶ್ಲೇಷಿಸುವಂತಹ ಕೆಲಸವನ್ನು ಯಾವ ಕಾನೂನಿನ ಅಡಿಯಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ಗೆ ವಹಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ನ್ಯಾಯಾಲಯವು ನಿಜವಾಗಿಯೂ ಇದೀಗ ವಿಫಲವಾಗಿದೆ” ಎಂದು ಪೀಠವು ಹೇಳಿತು. ಎಂ.ಸಿ.ಸಿಗೆ ಪೀಠವು ಛೀಮಾರಿಯನ್ನು ಹಾಕಿದ್ದು, ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವಂತೆ ಇದೀಗ ಆದೇಶ ಮಾಡಿದೆ. ನೀರಿನ ಗುಣಮಟ್ಟ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮಾಸಿಕ ವರದಿಯನ್ನು ಕೂಡ ಸಲ್ಲಿಸುವಂತೆ ಕೆಎಸ್ಪಿಸಿಬಿ ಮತ್ತು ಎಂಸಿಸಿಗೆ ಪೀಠವು ನಿರ್ದೇಶಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಇನ್ನು ಮುಂದೂಡಿದೆ. ಅಣೆಕಟ್ಟಿನ ಪ್ರವೇಶ ಮತ್ತು ನಿರ್ಗಮನದಲ್ಲಿ ನಿವಾಸಿಗಳಿಗೆ ಸರಬರಾಜು ಮಾಡಿದಂತಹ ನೀರನ್ನು ಪರೀಕ್ಷಿಸಲು ಕೆಎಸ್ಪಿಸಿಬಿಗೆ ಪೀಠವು ಆದೇಶವನ್ನು ನೀಡಿದೆ .