•   Saturday, 28 Jan, 2023
NALIN KUMAR KATEEL KARNATAKA NEW CM BJP

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ‌ ನಳಿನ್ ಕುಮಾರ್ ಕಟೀಲು?

Generic placeholder image
  Vishwapriya News

ರಾಜ್ಯದಲ್ಲಿ ಬಾರಿ ಕುತೂಹಲ ಮೂಡಿಸಿರುವ ವಿಚಾರ ಅಂದರೆ ಅದು ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು.ಹೌದು ರಾಜಾಹುಲಿ ಎಂದೇ ಹೆಸರಾಗಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಬಿ ಎಸ್ ಯಡಿಯೂರಪ್ಪನವರು ಇಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ  ಆದರೆ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎಂಬುದಕ್ಕೆ ಈಗ ಬಹುತೇಕ ಉತ್ತರ ಸಿಕ್ಕಿದಂತಿದೆ.

ಬಿ.ಜೆ.ಪಿ ಯ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಇವರನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುವುದರ ಕುರಿತು ಬಲ್ಲ ಮೂಲಗಳಿಂದ ಮಾಹಿತಿ ದೊರಕಿದೆ.ಬಿ.ಜೆ.ಪಿ ಯ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ನೇಮಕ‌ ಮಾಡಲಾಗುವುದು ಎಂದು ಬಲ್ಲ ಮೂಲಗಳಿಂದ ವಿಶ್ವಪ್ರಿಯ ಗೆ ಮಾಹಿತಿ ದೊರಕಿದೆ.