•   Tuesday, 24 May, 2022
ಆನ್​ಲೈನ್ ಗೇಮ್ ಪೊಲೀಸ್ ಕಾಯ್ದೆ betting ban fantasy game dream 11

ಆನ್‌ಲೈನ್ ಜೂಜುಕೋರರಿಗೆ ಸರ್ಕಾರದಿಂದ ಶಾಕ್; ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಗ್ಯಾಂಬ್ಲಿಂಗ್ ಬ್ಯಾನ್!

Generic placeholder image
  Vishwapriya News

ರಾಜ್ಯದಲ್ಲಿ ಆನ್​ಲೈನ್ ಗೇಮ್ ಅನ್ನು ನಿಷೇಧಿಸಿ ಸರ್ಕಾರವು ಆದೇಶವನ್ನು ಹೊರಡಿಸಿದೆ. ಈ ಕುರಿತು ಪೊಲೀಸ್ ಕಾಯ್ದೆಗೆ ತಿದ್ದುಪಡಿಯನ್ನು ತಂದಂತಹ ಹಿನ್ನೆಲೆಯಲ್ಲಿ ಆದೇಶವು ಅಧಿಕೃತವಾಗಿ ಹೊರಬಿದ್ದಂತಾಗಿದೆ.

ಆನ್‌ಲೈನ್ ಜೂಜುಕೋರರಿಗೆ ಸರ್ಕಾರದಿಂದ ಇದೀಗ ಶಾಕ್ ನೀಡಲಾಗಿದ್ದು, ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಗ್ಯಾಂಬ್ಲಿಂಗ್ (Online gambling)​ ಅನ್ನು ನಿಷೇಧಿಸಿ ಆದೇಶವನ್ನು ಹೊರಡಿಸಲಾಗಿದೆ. ಡ್ರೀಮ್ ಇಲೆವೆನ್ (Dream 11), ಪೇ ಟೀಂ ಫಸ್ಟ್ (PayTM first), ಗೇಮ್​ಜಿ (Gamezy) ಆ್ಯಪ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್ (Fantasy gamess) ಆಪ್​ಗಳನ್ನು ಇನ್ನು ಮುಂದೆ ಸ್ಥಗಿತಗೊಳಿಸಲಾಗುತ್ತದೆ. ಇತ್ತೀಚೆಗಷ್ಟೇ ಸರ್ಕಾರ ಆನ್‌ಲೈನ್ ಗೇಮ್‌, ಆನ್‌ಲೈನ್ ಜೂಜು, ಬೆಟ್ಟಿಂಗ್‌ಗೆ ನಿಷೇಧವನ್ನು ಹೇರಿತ್ತು. ಇದೀಗ ಪೊಲೀಸ್ ಕಾಯ್ದೆಗೆ ತಿದ್ದುಪಡಿಯನ್ನು ತಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಜೂಜು ನಿಷೇಧದ ಆದೇಶವನ್ನು ಅಧಿಕೃತವಾಗಿ ಹೊರಬಿದ್ದಿದೆ.

ಇತ್ತೀಚೆಗಷ್ಟೇ ಸರ್ಕಾರವು ಲಾಟರಿ ಹೊರತುಪಡಿಸಿ, ಕಂಪ್ಯೂಟರ್ ಮತ್ತು ಮೊಬೈಲ್ ‌ಸೇರಿ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಹಣದ ವ್ಯವಹಾರ ನಡೆಸುವ ಆನ್ ಲೈನ್ ಗ್ಯಾಂಬ್ಲಿಂಗ್ ಗೇಮ್ ನಿಷೇಧಕ್ಕೆ ಚಿಂತನೆಯನ್ನು ನಡೆಸುತ್ತಿರುವುದಾಗಿ ತಿಳಿಸಿತ್ತು. ಈಗಾಗಲೇ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಆನ್​ಲೈನ್ ಜೂಜನ್ನು ನಿಷೇಧಿಸಲಾಗಿದೆ. ತಮಿಳು ನಾಡು ಸರ್ಕಾರವೂ ಕೂಡ ಈ ಕುರಿತು ಆದೇಶವನ್ನು ಹೊರಡಿಸಿದೆ. ಆದರೆ ಅಲ್ಲಿ ಪ್ರಕರಣವು ಸದ್ಯ ನ್ಯಾಯಾಲಯದಲ್ಲಿರುವುದರಿಂದ ಸಂಪೂರ್ಣವಾಗಿ ನಿಷೇಧವನ್ನು ಜಾರಿಗೊಳಿಸಲಾಗಿಲ್ಲ. ಇದೀಗ ಕರ್ನಾಟಕದಲ್ಲಿ ಆನ್​ಲೈನ್ ಜೂಜಿಗೆ ಅಧಿಕೃತವಾಗಿ ನಿಷೇಧದ ಆದೇಶವು ಹೊರಬಿದ್ದಿದೆ. ಇತ್ತೀಚೆಗಷ್ಟೇ ಎಂಪಿಎಲ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್​ಗಳು ಕರ್ನಾಟಕ ರಾಜ್ಯದ ಬಳಕೆದಾರರಿಗೆ ಆಡಲು, ಸರ್ಕಾರದಿಂದ ಅನುಮತಿ ಇಲ್ಲ ಎಂಬ ಸಂದೇಶವನ್ನು ಮಾಧ್ಯಮಗಳು ಪ್ರಕಟಿಸಿದ್ದವು.

ಆನ್​ಲೈನ್ ಜೂಜನ್ನು ಪ್ರಸ್ತುತಪಡಿಸುವ ಈ ಆಪ್​ಗಳು ಇದುವರೆಗೆ ಇವುಗಳನ್ನು ಕೌಶಲ್ಯಯುತ ಆಟಗಳು ಎಂಬುದಾಗಿ ಕರೆಯುತ್ತಿದ್ದವು. ಆದ್ದರಿಂದಲೇ ಭಾರತೀಯ ಕಾನೂನಿನಲ್ಲಿ ಅವುಗಳಿಗೆ ಕಠಿಣವಾದ ನಿಯಮಗಳು ಅನ್ವಯವಾಗುತ್ತಿರಲಿಲ್ಲ. ಆದರೆ ಇದೀಗ ಕರ್ನಾಟಕದ ಆನ್​ಲೈನ್ ಜೂಜು ನಿಷೇಧ ಕಾಯ್ದೆಯ ಅನ್ವಯ, ‘ಕೌಶಲ್ಯಯುತ ಆಟಗಳೂ ಸೇರಿದಂತೆ, ಆನ್​ಲೈನ್ ಗೇಮ್​ಗಳಲ್ಲಿ, ಫಲಿತಾಂಶ ಖಚಿತವಾಗಿರದ ಆಟಗಳಲ್ಲಿ ಹಣವನ್ನು ಒಡ್ಡುವುದು ಅಪರಾಧ’ ಎಂಬುದಾಗಿ  ಕಾಯ್ದೆಯು ಹೇಳುತ್ತದೆ. ಈ ಮೂಲಕ ಆನ್​ಲೈನ್ ಜೂಜಿಗೆ ನಿಷೇಧವನ್ನು ಹೇರಲಾಗಿದೆ.