kaup news
kaup news today
kaup news latest
kaup news The cancellation of the CM's visit to Kadalkoretta area has left the locals disappointed
ಕಾಪು: ಮೂಳೂರು ಕಡಲ್ಕೊರೆತ ಪ್ರದೇಶಕ್ಕೆ ಸಿಎಂ ಭೇಟಿ ರದ್ದು ಸ್ಥಳೀಯರಲ್ಲಿ ನಿರಾಸೆ


Vishwapriya News
ಕಾಪು, ಜುಲೈ 14: ಮೂಳೂರಿನ ತೊಟ್ಟಂ ಕಡಲ್ಕೊರೆತ ಪ್ರದೇಶಕ್ಕೆ ಬೊಮ್ಮಾಯಿ ಅವರ ಭೇಟಿ ಗುರುವಾರ ಸಂಜೆಗೆ ನಿಗದಿಯಾಗಿದ್ದು, ಕೊನೆ ಕ್ಷಣದಲ್ಲಿ ರದ್ದಾದ ಪರಿಣಾಮ ಸ್ಥಳೀಯರಲ್ಲಿ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಸಿಎಂ ಆಗಮನಕ್ಕಾಗಿ ಜಲ್ಲಿ ಹುಡಿ ಹಾಕಿ ತಾತ್ಕಾಲಿಕ ರಸ್ತೆ ನಿರ್ಮಾಣ ಕೂಡ ಮಾಡಲಾಗಿತ್ತು. ಕಾಪು ಪೊಲೀಸರೊಂದಿಗೆ, ಅಂಬುಲೆನ್ಸ್, ವಿವಿಧ ಇಲಾಖಾ ಅಧಿಕಾರಿಗಳು ಸ್ಥಳದಲ್ಲಿ ಮುಕ್ಕಂ ಹೂಡಿದ್ದರು. ಬಿಜೆಪಿ ಕಾರ್ಯಕರ್ತರೂ ಸ್ಥಳಕ್ಕೆ ಆಗಮಿಸಿದ್ದು, ಜಡಿ ಮಳೆಯಲ್ಲಿಯೇ ಸಿಎಂ ಗಾಗಿ ಕಾಯುತ್ತಿರುವುದು ಕಂಡು ಬಂದಿದೆ.
ಸಿಎಂ ಬೊಮ್ಮಾಯಿಯವರು ಸಂಜೆ ನಾಲ್ಕು ಗಂಟೆಗೆ ಆಗಮಿಸುವ ಹಿನ್ನಲೆಯಲ್ಲಿ ಸ್ಥಳೀಯರು ಕಡಲ ಕಿನಾರೆಗೆ ಮದ್ಯಾಹ್ನವೇ ಆಗಮಿಸಿದ್ದರು. ಈ ಸಂದರ್ಭ ಸ್ಥಳೀಯರು ಮಾತನಾಡಿ, ಸಿಎಂ ಬಾರದಿರುವುದರಿಂದ ನಮಗೆ ತುಂಬಾ ನಿರಾಸೆ ಉಂಟಾಗಿದೆ. ಸಿಎಂ ಬಾರದಿದ್ದರೂ, ತಡೆಗೋಡೆ ಕಾಮಗಾರಿ ನಿರಾಂತಕವಾಗಿ ನಡೆಯಲಿ ಎಂದು ಹೇಳಿದ್ದಾರೆ