•   Tuesday, 05 Jul, 2022
vishwapriya news local news local tulu news local kannada news kannada news tulu news tununaad news breaking news shocking news udupi breaking news manglore breaking news banglore breaking news latest news today breaking news news today big news trending news live news first news india news karnataka news international news news first todays kannada news todays tulu news english news tulu kannada telugu tamil national news kgf news

ಮಲ್ಪೆ: ಚಲಿಸುತ್ತಿದ್ದ ಸ್ಕೂಟರ್ ನಲ್ಲೇ ಹೃದಯಾಘಾತ - ಸಾವು

Generic placeholder image
  Vishwapriya News

ಮಲ್ಪೆ, ಮೇ 20 : ಮೀನುಗಾರಿಕೆಯನ್ನು ಮುಗಿಸಿಕೊಂಡು ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ತೆರಳುತ್ತಿದ್ದಂತಹ ಸಂದರ್ಭದಲ್ಲಿ ಹೃದಯಾಘಾತದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆಯೊಂದು ಮಲ್ಪೆ ಕಂಬಳತೋಟ ಎಂಬಲ್ಲಿ ಮೇ.18ರಂದು ನಡೆದಿದೆ.

ಮೃತರನ್ನು ಮಲ್ಪೆ ಕಂಬಳತೋಟದ ನಿವಾಸಿ ಪ್ರತಾಪ್ (32) ಎಂಬುದಾಗಿ ಗುರುತಿಸಲಾಗಿದೆ.

ಬೆಳಗ್ಗೆ ಮೀನುಗಾರಿಕೆ ಕೆಲಸ ಮುಗಿಸಿಕೊಂಡು ಅಕ್ಕನ ಮಗ ಕಿರಣ್ ಅವರ ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪ್ರತಾಪ್ ಅಸ್ವಸ್ಥಗೊಂಡು ಕಿರಣ್ ಮೈಮೇಲೆ ಬಿದ್ದಿದ್ದರು. ತಕ್ಷಣವೇ ಕಲ್ಯಾಣಪುರ ಗೊರಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಪ್ರತಾಪ್ ಆದಾಗಲೇ ಮೃತಪಟ್ಟಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ