ಹಿಜಬ್ ವಿವಾದ – ಮುಸ್ಲಿಂ ಸಂಘಟನೆಗಳ ಬಂದ್ ಕರೆಗೆ ಕರಾವಳಿಯಲ್ಲಿ ಭಾಗಶಃ ಬೆಂಬಲ
.jpg)

ಮಂಗಳೂರು : ರಾಜ್ಯ ಹೈಕೋರ್ಟ್ ನೀಡಿರುವಂತಹ ಹಿಜಬ್ ತೀರ್ಪನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಭಾಗಶಃ ಬೆಂಬಲವು ಇದೀಗ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಬಹುತೇಕ ಮುಸ್ಲಿಂ ವರ್ತಕರ ಅಂಗಡಿಗಳನ್ನ ಮುಚ್ಚಿ ಬೆಂಬಲವನ್ನು ನೀಡಿದ್ದಾರೆ. ಆದರೆ ಉಡುಪಿಯಲ್ಲಿ ಭಾಗಶಃ ಮಾತ್ರ ಬೆಂಬಲವು ವ್ಯಕ್ತವಾಗಿದೆ.
ಮುಸ್ಲಿಮರಿಗೆ ಸೇರಿದ ಬಹುತೇಕ ಅಂಗಡಿಗಳು, ಮಳಿಗೆಗಳು, ಹೊಟೇಲ್ ಗಳು ತೆರೆಯಲಿಲ್ಲ. ಬಸ್, ರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ. ಕೆಲವು ಶಿಕ್ಷಣ ಸಂಸ್ಥೆಗಳು, ಮದ್ರಸಗಳಿಗೆ ರಜೆಯನ್ನು ಕೂಡ ಸಾರಲಾಗಿದೆ. ಅಲ್ಲದೆ ಬಂದರ್, ಸ್ಟೇಟ್ ಬ್ಯಾಂಕ್ ರಸ್ತೆ ಬದಿ, ಮಾರ್ಕೆಟ್ ರಸ್ತೆ, ಕಲ್ಲಾಪಿನ ಮಾರ್ಕೆಟ್, ಬಂದರ್ ಧಕ್ಕೆಯಲ್ಲಿ ವ್ಯವಹಾರ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮುಸ್ಲಿಂ ಮಾಲಕತ್ವದ ಕಚೇರಿಗಳು, ವರ್ಕ್ ಶಾಪ್‌ಗಳು, ಸಾರಿಗೆ ಸಂಸ್ಥೆಗಳು, ಗುತ್ತಿಗೆ ಸಂಸ್ಥೆಗಳು ಕೂಡ ಮುಚ್ಚಲ್ಪಟ್ಟಿವೆ.
ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಕೆಲವೊಂದು ಮುಸ್ಲಿಂ ವ್ಯಾಪಾರಸ್ಥರು ಬಂದ್‌ಗೆ ಬೆಂಬಲಿಸಿದ್ದು, ಮುಸ್ಲಿಂ ಮಾಲೀಕತ್ವದ ಕೆಲವೊಂದು ಅಂಗಡಿಗಳು ಓಪನ್ ಇದೆ. ಇನ್ನು ಬಂದ್ ಮಾಡಬೇಕೋ ಇಲ್ಲವೋ ಎಂದು ಕೆಲವೊಂದು ಅಂಗಡಿಗಳ ಮಾಲಿಕರು ಗೊಂದಲದಲ್ಲಿದ್ದು, ಸದ್ಯ ಮುಸ್ಲಿಂರ ಮಾಲೀಕತ್ವದ ಅಂಗಡಿ ಮಳಿಗೆಗಳ ಬಳಿ ಪೋಲಿಸ್ ಬಂದೋಬಸ್ತ್ ಅನ್ನು ಮಾಡಲಾಗಿದೆ