•   Tuesday, 24 May, 2022
vishwapriya news local news local tulu news local kannada news kannada news tulu news tununaad news breaking news shocking news udupi breaking news manglore breaking news banglore breaking news latest news today breaking news news today big news trending news live news first news india news karnataka news international news news first todays kannada news todays tulu news english news tulu kannada telugu tamil national news kgf news

ಮಂಗಳೂರು: ಎಲ್‌ಪಿಜಿ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ - ಸ್ಥಳೀಯರ ಸಹಕಾರದಿಂದ ತಪ್ಪಿದ ಅನಾಹುತ

Generic placeholder image
  Vishwapriya News

ಮಂಗಳೂರು, ಮೇ 13 : ಮಂಗಳೂರಿನಿಂದ ಉಡುಪಿಗೆ ಎಚ್‌.ಪಿ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದಂತಹ ಟ್ರಕ್‌ನಲ್ಲಿ ಏಕಾಏಕಿಯಾಗಿ ಬೆಂಕಿಯು ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಇದು ಆತಂಕವನ್ನು ಮೂಡಿಸಿದೆ.

ಟ್ರಕ್ ಚಾಲಕ ಗುರುವಾರ ರಾತ್ರಿ ಹೆಜಮಾಡಿ ಟೋಲ್ ಪ್ಲಾಜಾ ಬಳಿ ವಾಹನವನ್ನು ನಿಲ್ಲಿಸಿ ಚಹಾ ಕುಡಿಯಲು ಸಮೀಪದ ಸ್ಟಾಲ್‌ಗೆ ಹೋಗಿದ್ದು, ಈ ವೇಳೆ ಚಾಲಕನ ಸೀಟಿನ ಕೆಳಗೆ ಬೆಂಕಿಯು ಕಾಣಿಸಿಕೊಂಡಿದೆ.

ತಕ್ಷಣ ಸಮೀಪದ ಸಣ್ಣಪುಟ್ಟ ಅಂಗಡಿಗಳ ಎಲ್ಲಾ ಸಿಬ್ಬಂದಿ, ಟೋಲ್ ಪ್ಲಾಜಾ ಸಿಬ್ಬಂದಿ ಮತ್ತು ಸ್ಥಳೀಯರು ಬಕೆಟ್‌ಗಳಲ್ಲಿ ನೀರು ಸುರಿದು ಬೆಂಕಿಯನ್ನು ನಂದಿಸಿದ್ದಾರೆ.

ಇನ್ನು ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಹಾಗೂ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಉಡುಪಿಯ ಅಗ್ನಿಶಾಮಕ ದಳದ ತಂಡ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಲಾಯಿತು.

ಎಲೆಕ್ಟ್ರಿಷಿಯನ್ ಗಳನ್ನು ಕರೆಸಿ ತಪಸಣೆ ಮಾಡಿಸಿದಾಗ ವಾಹನದಲ್ಲಿನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ತಿಳಿದು ಬಂದಿದೆ