•   Wednesday, 22 Mar, 2023
manipal shivalli women missing complaint case

ಮಣಿಪಾಲ ಶಿವಳ್ಳಿಯ ಯುವತಿ ನಾಪತ್ತೆ; ಮೊಬೈಲ್ ಸ್ವಿಚ್ ಆಫ್ ; ಪ್ರಕರಣ ದಾಖಲು .

Generic placeholder image
  Vishwapriya News

ಮಣಿಪಾಲ : ಅಕ್ಟೋಬರ್ 20:ಶಿವಳ್ಳಿ ಗ್ರಾಮದ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ಇದೀಗ ದೂರು ದಾಖಲಾಗಿದೆ. 

ಮಣಿಪಾಲ ಶಿವಳ್ಳಿ ಗ್ರಾಮದ ನಿಶಾ ಡಿ. ಎಸ್ (21) ಇವರು ಕಾಣೆಯಾಗಿದ್ದು, ಈಕೆ ಅಕ್ಟೋಬರ್ 11 ರಂದು ರಾತ್ರಿ 7.50 ರ ವೇಳೆಗೆ ಉಡುಪಿಯ ಪಿಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದಳು. ಆದರೆ ನಿಶಾ ಪಿಜಿಗೂ ಹೋಗದೆ, ಮನೆಗೂ ಬಾರದೆ ಇದೀಗ ನಾಪತ್ತೆಯಾಗಿದ್ದಾಳೆ.ಇವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.