•   Tuesday, 05 Jul, 2022
latest mangalore news mangalore news today mangalore news kudla news

ಮಂಗಳೂರು : ಆಸ್ಪತ್ರೆಯಲ್ಲಿ ಹೆಣ್ಣಿನ ಬದಲು ಗಂಡು ಮಗು; ಪೊಲೀಸರಿಗೆ ದೂರು.

Generic placeholder image
  Vishwapriya News

ಮಂಗಳೂರು : ನಗರದ ಲೇಡಿ ಗೋಶನ್ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಬದಲಾಗಿ ಗಂಡು ಮಗುವನ್ನು ನೀಡಿರುವ ಕುರಿತು ಶುಕ್ರವಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.

 

ಕೋಟೇಶ್ವರ ನಿವಾಸಿಯಾಗಿರುವಂತಹ ಮುಸ್ತಫಾ ಎನ್ನುವವರು ಈ ಬಗ್ಗೆ ದೂರು ನೀಡಿದ್ದು, ಸೆಪ್ಟೆಂಬರ್ 27 ರಂದು ಅವರ ಪತ್ನಿ ಅಮ್ರೀನ್ ಎನ್ನುವವರು ಈ ಆಸ್ಪತ್ರೆಯಲ್ಲಿ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಸಿಬ್ಬಂದಿಗಳು ಹೆಣ್ಣು ಮಗು ಆಗಿರುವ ಬಗ್ಗೆ ನಮಗೆ ದಾಖಲೆಗಳ ಮೂಲಕವಾಗಿ ತಿಳಿಸಿದ್ದರು. ಹೆರಿಗೆ ಬಳಿಕ ಮಗುವನ್ನು ರಾತ್ರಿ  ಐ‌.ಸಿ.ಯು ಗೆ ದಾಖಲಿಸಲಾಗಿತ್ತು. ಅಕ್ಟೋಬರ್ 14 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲಾಗಿದ್ದು ಈ ವೇಳೆಗೆ ಗಂಡು ಮಗುವಾಗಿತ್ತು ಎಂದು ದೂರಿನಲ್ಲಿ ಇದೀಗ ಹೇಳಿಕೊಳ್ಳಲಾಗಿದೆ.

 

ಇದು ಪ್ರಮಾದ, ಕಣ್ತಪ್ಪಿನಿಂದ ಗಂಡು ಮಗು ಎಂದು ನಮೂದಿಸುವ ಬದಲು ಹೆಣ್ಣು ಮಗು ಎಂದು ವೈದ್ಯರು ಬರೆದಿದ್ದರು, ಅಷ್ಟೇ ಹೊರತು ಮಗು ಬದಲಾಗಿಲ್ಲ. ಈ ಬಗ್ಗೆ ಕ್ಷಮೆ ಯಾಚಿಸುತ್ತೇವೆ ಎಂಬುದಾಗಿ ಆಸ್ಪತ್ರೆಯ ಅಧಿಕಾರಿಗಳು ಇದೀಗ ಸ್ಪಷ್ಟನೆ ನೀಡಿದ್ದಾರೆ.