ಕೊರೋನಾ ಸೋಂಕಿಗೆ ಬಲಿಯಾದ ಪ್ರಖ್ಯಾತ ಅಥ್ಲೀಟ್ ಮಿಲ್ಕಾ ಸಿಂಗ್.


Vishwapriya News
ಚಂಡೀಗಡ : ಕೊರೋನಾ ಎಂಬ ಮಹಾಮಾರಿ ಕಾಯಿಲೆಯಿಂದ ಬಳಲುತ್ತಿದ್ದ ದೇಶ ಕಂಡ ಪ್ರಖ್ಯಾತ ಕ್ರೀಡಾಪಟು ಮಿಲ್ಕಾ ಸಿಂಗ್ (91) ಇವರು ಶುಕ್ರವಾರ ತಡರಾತ್ರಿಯಂದು ನಿಧನರಾದರು. ಸರಿ ಸುಮಾರು ಒಂದುವರೆ ತಿಂಗಳ ಕಾಲ ಕೊರೋನಾ ಕಾಯಿಲೆಯಿಂದ ಬಳಲುತ್ತಿದ್ದ ಇವರು ಕೊನೆಗೂ ಇದರಿಂದ ಹೊರಬರಲು ಸಾಧ್ಯವಾಗಲಿಲ್ಲ.
ಕೋವಿಡ್ ಗೆ ಒಳಗಾದ ನಂತರ ಇವರು ಪಿ.ಜಿ..ಐ.ಎಮ್.ಇ.ಆರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇವರ ಪತ್ನಿಯೂ ಕೂಡ ಖ್ಯಾತ ಕ್ರೀಡಾಪಟು ಆಗಿದ್ದು ಇವರು ಭಾರತದ ವಾಲಿಬಾಲ್ ತಂಡದಲ್ಲಿ ಮಾಜಿ ನಾಯಕಿಯಾಗಿದ್ದರು .ಅವರ ಹೆಸರು ನಿರ್ಮಲಕೌರ್.ಇವರು ಕೂಡ ಹಲವು ದಿನಗಳ ಹಿಂದೆ ಕೋವಿಡ್ ಗೆ ಬಲಿಯಾಗಿದ್ದರು.
ಮಿಲ್ಕಾ ಸಿಂಗ್ ಇವರು ರೋಮ್ ಒಲಿಂಪಿಕ್ಸ್ನಲ್ಲಿ 1960 ರ 400 ಮೀಟರ್ ನ ರನ್ನಿಂಗ್ ರೇಸ್ ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದರು. 1958 ರ ಕಾಮನ್ ವೆಲ್ತ್ ಆಟದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಏಷ್ಯನ್ ಗೇಮ್ಸ್ ನಲ್ಲಿ ಸತತವಾಗಿ ನಾಲ್ಕು ಬಾರಿ ಚಿನ್ನವನ್ನು ಗೆದ್ದಂತಹ ಸಾಧನೆ ಇವರದ್ದು.