•   Wednesday, 22 Mar, 2023
perne news perne news today perne news latest perne news Heavy winds uprooted two huge trees causing chaos in traffic

ಪೆರ್ನೆ ಬಳಿ ಭಾರೀ ಗಾಳಿಗೆ ಬೃಹತ್ ಗಾತ್ರದ ಎರಡು ಮರಗಳು ಧರೆಗೆ- ಸಂಚಾರದಲ್ಲಿ ಅಸ್ತವ್ಯಸ್ತ

Generic placeholder image
  Vishwapriya News

ಪೆರ್ನೆ, ಜುಲೈ 14 : ಭಾರೀ ಗಾಳಿಗೆ ಬೃಹತ್ ಗಾತ್ರದ ಎರಡು ಮರಗಳು ಧರೆಗುರುಳಿದ ಘಟನೆಯೊಂದು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸಮೀಪದ ದೋರ್ಮೆ ಎಂಬಲ್ಲಿ ನಡೆದಿದೆ.

ಬೃಹತ್ ಗಾತ್ರದ ಎರಡು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಈ ಹಿನ್ನೆಲೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.

ಮರ ಬಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ವಿದ್ಯುತ್ ಕಂಬಗಳು ಸಹ ಧರೆಗುರುಳಿವೆ. ಸ್ಥಳೀಯರು ಮರ ತೆರವು ಗೊಳಿಸಿದ್ದಾರೆ.