•   Tuesday, 29 Nov, 2022
vishwapriya news local news local tulu news local kannada news kannada news tulu news tununaad news karnataka news breaking news shocking news udupi breaking news manglore breaking news banglore breaking news latest news today breaking news news today big news trending news live news first news india news

ಮಿತ್ತಬೈಲು ಮಸೀದಿಗೆ ನುಗ್ಗಿ ಹತ್ಯೆ ಬೆದರಿಕೆ ಆರೋಪಿ ಪೊಲೀಸ್ ವಶಕ್ಕೆ

Generic placeholder image
  Vishwapriya News

ಬಂಟ್ವಾಳ: ಮಾರಕಾಸ್ತ್ರಗಳೊಂದಿಗೆ ಮಸೀದಿಗೆ ನುಗ್ಗಲು ಯತ್ನಿಸಿದ್ದಂತಹ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಬಿ.ಸಿ.ರೋಡು ಬಳಿಯ ಮಿತ್ತಬೈಲು ಕೇಂದ್ರ ಜುಮಾ ಮಸೀದಿಯಲ್ಲಿ ನಡೆದಿದೆ.

ಆರೋಪಿಯನ್ನು ಬಾಬು ಪೂಜಾರಿ (60) ಎಂಬುದಾಗಿ ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಆತ ರಾತ್ರಿ ಮಸೀದಿಯ ಬಳಿ ದ್ವಿಚಕ್ರ ವಾಹನವನ್ನಿಟ್ಟು ಅಕ್ರಮವಾಗಿ ಮಸೀದಿಯೊಳಗೆ ನುಗ್ಗಿದ್ದಾನೆ. ಈ ವೇಳೆಗೆ ಮಸೀದಿಯ ಗುರುಗಳು ಆತನನ್ನು ವಿಚಾರಿಸಿದಾಗ, ನಾನು ಮಸೀದಿಯ ಗುರುಗಳನ್ನು ಹತ್ಯೆ ಮಾಡಲು ಬಂದಿದ್ದು, ಹತ್ಯೆಯನ್ನು ಮಾಡುತ್ತೇನೆ, ನನ್ನನ್ನು ನೀವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ ಎಂದು ಹೇಳಲಾಗಿದೆ. ಆತನ ಸ್ಕೂಟರ್ ನಲ್ಲಿ ಚೂರಿಯೊಂದನ್ನು ತೆಗೆದುಕೊಂಡು ಬಂದಿದ್ದ